Volume 14 | Issue 5
Volume 14 | Issue 5
Volume 14 | Issue 5
Volume 14 | Issue 5
Volume 14 | Issue 5
ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಬ್ಬ ಮನುಷ್ಯನು ಸುಖವಾಗಿ ಬಾಳಬೇಕು ಸುಖ- ದುಃಖಗಳು ಸಮಾನವಾಗಿ ಸ್ವೀಕರಿಸಿ ಜೀವನ ನಡೆಸಬೇಕು. ಮನುಷ್ಯರ ನಡುವೆ ಯಾವುದೇ ಭೇದವಿಲ್ಲ ಎಲ್ಲರೂ ಸಮಾನರು ಎಂದು ಸಾರುತ್ತ ಬಸವಾದಿ ಶರಣರು ಸಾಮಾಜಿಕ ಸಮಾನತೆಯ ತಳಹದಿ ಮೇಲೆ ಸಮಾಜವನ್ನು ಕಟ್ಟ ಬಯಸಿದರು. ಧರ್ಮದ ಹೆಸರಿನಲ್ಲಿ ನಡೆಯುತ್ತಿದ್ದ ಅನಿಷ್ಟ ಪದ್ದತಿಗಳ ವಿರುದ್ಧ ಧ್ವನಿ ಎತ್ತಿದರು. ಭಕ್ತಿ ಮತ್ತು ದೇವರ ಮಧ್ಯೆ ಯಾವುದೇ ಅಂತರವಿಲ್ಲ ಸತ್ಯ ನುಡಿಯುವದೇ ದೇವಲೋಕ ಮಿತ್ಯ ನುಡಿಯುವುದೇ ಮರೆತ ಲೋಕ ಎಂದು ಬಸವಾದಿ ಶರಣರು ಹೇಳಿದರು. ಧರ್ಮ ದೊಡ್ಡದಲ್ಲ ಧರ್ಮ ಮನುಷ್ಯ ನಿರ್ಮಾಣ ಮಾಡಿದ್ದು ಧರ್ಮದ ಹೆಸರಿನಲ್ಲಿ ಮನುಷ್ಯನ ಬದುಕು ಹಾಳಾಗುವುದನ್ನು ಖಂಡಿಸಿದರು. ಜಾತಿ,ಮತ,ಪಂಥ ಎಂದು ಪುರೋಹಿತ ಶಾಯಿ ವರ್ಗ ಗರ್ವಹಂಕಾರದಿಂದ ಮೆರೆಯುತ್ತಿರುವ ಕಾಲಮಾನದಲ್ಲಿ ಯಾರೂ ಶ್ರೇಷ್ಠರಲ್ಲ ಯಾರೂ ಕನಿಷ್ಠರಲ್ಲ ಎಂದು ಮನುಷ್ಯ ಜೀವಿಗಳಿಗೆ ಸಮಾನತೆ ಅರಿವು ಮೂಡಿಸಿದರು. ಆದ್ಯ ವಚನಕಾರ ಜೇಡರ ದಾಸಿಮಯ್ಯ ಸಾಮಾಜದ ಜನರ ಮನಸ್ಥಿತಿಯನ್ನು ತಿಳಿಸುವಲ್ಲಿ ಒಂದು ವಚನ ವಚನದಲ್ಲಿ ಹೇಗೆ ಹೇಳುತ್ತಾರೆ.