Volume 14 | Issue 5
Volume 14 | Issue 5
Volume 14 | Issue 5
Volume 14 | Issue 5
Volume 14 | Issue 5
ಭರತೇಶವೈಭವ ಕೃತಿಯ ರಚಿಸಿದ ರತ್ನಾಕರವರ್ಣಿಯು ಕ್ರಿ.ಶ.1557ರ ಕಾಲಘಟ್ಟದಲ್ಲಿ, ವೇಣುಪುರವೆಂದು ಹೆಸರಾದ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯಲ್ಲಿ ಜನನವಾಯಿತೆಂದು ತಿಳಿದು ಬರುತ್ತದೆ. ದೇವರಾಜನ ಮಗನಾಗಿ, ವಿಜಯನಗರದ ಅರಸರ ಸಾಮಂತ ರಾಜನಾದ ಕಾರ್ಕಳದ ಭೈರ ಅರಸನ ಆಸ್ಥಾನದಲ್ಲಿದ್ದವನೆಂದು, ಹಾಗೆಯೇ ಚಾರುಕೀರ್ತಿ ಆಚಾರ್ಯರಿಂದ ದೀಕ್ಷೆಪಡೆದು, ಹಂಸನಾಥರಿAದ ಮೋಕ್ಷಾದೀಕ್ಷೆ ಪಡೆದುದಾಗಿ ತಿಳಿಯುತ್ತದೆ. ರತ್ನಾಕರವರ್ಣಿಗೆ 'ರತ್ನಾಕರ ಅಣ್ಣ', 'ರತ್ನಾಕರಸಿದ', 'ಶೃಂಗಾರ ಕವಿ' ಎನ್ನುವ ಬಿರುದುಗಳಿದ್ದುದನ್ನು ನೋಡಬಹುದು. ಹಾಗೆಯೇ ಕವಿಯ ಬಗೆಗೆ ಎರಡು ವಿಭಿನ್ನ ಕಥೆಗಳು ಅವನ ಜೀವನವನ್ನು ಸುತ್ತುಹಾಕಿಕೊಂಡಿವೆ. ಕವಿಯ ಜೀವನದ ವೈಯಕ್ತಿಕ ಬದುಕಿನ ಚರಿತ್ರೆಗೆ ನನ್ನ ಲೇಖನವನ್ನು ಅಣಿಗೊಳಿಸದೆ ಕೇವಲ ಅವನ ಅನೇಕ ಕೃತಿಗಳಲ್ಲಿ ಒಂದೇ ಒಂದು ಕೃತಿಯಾದ 'ಭರತೇಶವೈಭವ' ಅದರಲ್ಲಿಯೂ ಕೃತಿಯಲ್ಲಿ ಬರುವ ಕೇವಲ 'ಭರತನ' ವೈಶಿಷ್ಟ್ಯವನ್ನು ಮಾತ್ರ ಈ ಲೇಖನದಲ್ಲಿ ತರಲು ಪ್ರಯತ್ನಿಸುತ್ತೇನೆ.