Volume 14 | Issue 5
Volume 14 | Issue 5
Volume 14 | Issue 5
Volume 14 | Issue 5
Volume 14 | Issue 5
ಅಂದರೆ ಪ್ರಾಚೀನ ಮಾನವನಿಂದ ಮೊದಲಾಗಿ ಇಂದುತನಕ ನಡೆದ ಘಟನೆಗಳ ಕ್ರಮಬದ್ಧ 'ದಾಖಲಿತ' ಕಥನವೇ ಇತಿಹಾಸ ಎಂಬಂತೆ ನಿರೂಪಿಸಲಾಗಿದೆ. ಯಾವುದೇ ಇತಿಹಾಸಕ್ಕೆ ಸಂಬಂಧಿಸಿದರೂ ಪುರಾವೆಗಳು ಇರಲೇಬೇಕು. ಅಂದರೆ ಲಿಖಿತ ಮತ್ತು ಸಂಬಂಧಿಸಿದ ಭೌತಿಕ ಆಕರ ಸಾಮಗ್ರಿಗಳೇ ಆಗಿರಬೇಕೆಂದೂ, ಸಮುದಾಯಗಳು ತಲೆಮಾರುಗಳಿಂದ ಹೊತ್ತು ತಂದ ನೆನಪುಗಳು, ಗಾದೆಗಳು, ಐತಿಹ್ಯಗಳು, ದಂತಕಥೆಗಳು, ಕಥೆ-ಗೀತೆಗಳಂಥ ಸಾಹಿತ್ಯ ಸಾಮಗ್ರಿಗಳು ನಂಬಲರ್ಹ ದಾಖಲೆಗಳಾಗಿ ಪರಿಗಣಿಸಬಾರದೆಂದು ತಾತ್ವಿಕರಿಸಿಕೊಂಡಿದೆ. ಹೀಗಾಗಿ ಇತಿಹಾಸದ ಕಾಲಕ್ರಮಗಳನ್ನು ಮತ್ತು ಅದರ ಸ್ವರೂಪ, ವಿನ್ಯಾಸಗಳನ್ನು ಪ್ರತಿಪಾದಿಸುವ ಗದ್ಯಶಾಸನಗಳು, ತಾಮ್ರಪಟಗಳು, ಶಿಲ್ಪಕಲೆಗಳು, ಆಯುಧಗಳು, ಲೋಹಗಳು, ಕಟ್ಟಡಗಳನ್ನು ಪ್ರಾಥಮಿಕ ಮೂಲ ಆಕರಗಳೆಂದು ಪರಿಗಣಿಸಬೇಕು. ಈ ಪ್ರಾಥಮಿಕ ಮೂಲ ಆಧಾರಗಳಿಂದಲೇ ಇತಿಹಾಸ ರಚನೆ ಮಾಡಬೇಕೆಂಬ ತಿಳಿವಳಿಕೆ ಪಶ್ಚಿಮದಲ್ಲಿ ಪ್ರಬಲವಾಗಿ ಬೆಳೆಯಿತು. ಆಗ ಆ ಇತಿಹಾಸ ಕಥನಕ್ಕೆ ತಾರ್ಕಿಕವೂ ಮತ್ತು ವೈಜ್ಞಾನಿಕ ಸ್ವರೂಪವೂ ಪ್ರಾಪ್ತವಾಗಿ ನಿರೂಪಿಸಲಾದ ಮಾಹಿತಿಗಳು ವಿಶ್ವಾಸರ್ಹವೆನಿಸುತ್ತವೆ ಎಂದು ನಂಬಲಾಯಿತು. ಈ ಬಗೆಯ ಆಲೋಚನೆಗಳಿಗೆ ಅಡಿಪಾಯ ಹಾಕಿ ಮುನ್ನೆಲೆಗೆ ತಂದು ಪರಂಪರೆಯನ್ನು ಬೆಳೆಸಿದವರೆಂದರೆ ಪ್ರಾಚೀನ ಗ್ರೀಕ್ ಮತ್ತು ರೋಮನ್ನರು.