Volume 14 | Issue 5
Volume 14 | Issue 5
Volume 14 | Issue 5
Volume 14 | Issue 5
Volume 14 | Issue 5
ಮಧ್ಯಕಾಲೀನ ಕರ್ನಾಟಕ ಅನೇಕ ಸ್ಥಿತ್ಯಂತರಗಳಿಗೆ ಒಳಗಾದ ಕಾಲಘಟ್ಟ. ರಾಜಕೀಯವಾಗಿ, ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ಹಾಗೂ ಸಾಮಾಜಿಕವಾಗಿ ಈ ಅವಧಿ ಅನೇಕ ಪಲ್ಲಟಗಳಿಗೆ ಸಾಕ್ಷಿಯಾಯಿತು. ದೊಡ್ಡ ದೊಡ್ಡ ಸಾಮ್ಯಾಜ್ಯಗಳ ವೈಭವದ ಜಾಗದಲ್ಲಿ ಅನೇಕ ಸಣ್ಣಪುಟ್ಟ ಸಂಸ್ಥಾನಗಳು ಪಾಳೆಯಗಳು ತಲೆಯೆತ್ತುತ್ತಾ ಪ್ರಾದೇಶಿಕ ಅಸ್ಮಿತೆ ಜಾಗೃತಗೊಳ್ಳುತ್ತಿದ್ದ ಕಾಲ ಅದು. ಧಾರ್ಮಿಕವಾಗಿಯೂ ಜೈನಧರ್ಮದ ಏರುಗತಿ ಕಳೆದು ಹಲವು ಮತ ನಂಬಿಕೆಗಳ ನಡುವೆ ಸಂಘರ್ಷ, ಅನುಸಂಧಾನ, ಸಂಕರ ಎಲ್ಲವೂ ನಡೆಯುತ್ತಿದ್ದ ಕಾಲವೂ ಹೌದು. ಈ ಸಂಕರ ಮತ್ತು ಸಂಘರ್ಷದ ಕಾಲಘಟ್ಟದಲ್ಲಿ ವಿವಿಧ ನಂಬಿಕೆ ಆಚರಣೆಗಳ ನಡುವೆ ಒಂದಕ್ಕಿಂತ ಒಂದು ಮೇಲ್ಮೆಯನ್ನು ಸಾಧಿಸುವ ಪ್ರಯತ್ನಗಳು ನಿರಂತರ ನಡೆದಿರುವುದು ಗೋಚರವಾಗುತ್ತದೆ. ಜೈನ, ವೀರಶೈವ, ವೈದಿಕ ನಂಬಿಕೆಗಳ ನಡುವೆ ಸಂಘರ್ಷ, ಸಹಬಾಳ್ವೆ ಎರಡನ್ನೂ ಕಾಣಲು ಸಾಧ್ಯ. ಇಲ್ಲಿ ಕಾಣುವ ದೇವರು, ಧರ್ಮ, ಆಚರಣೆಗಳಲ್ಲಿ ʼಆಹಾರʼದ ವಿಷಯವೂ ಬೇರ್ಪಡಿಸಲಾಗದಂತೆ ಬೆಸೆದುಕೊಂಡಿದೆ. ಇತಿಹಾಸವನ್ನು ಗಮನಿಸಿದಾಗ ಆಹಾರವೂ ಕೂಡಾ ಜನರ ಅಸ್ಮಿತೆ, ನಂಬಿಕೆ, ಅಧಿಕಾರದ ಜೊತೆ ಸೇರಿಕೊಂಡೇ ಇದೆ. ಈ ಹಿನ್ನೆಲೆಯಲ್ಲಿ ಮಧ್ಯಕಾಲೀನ ಕರ್ನಾಟಕದಲ್ಲಿ ಆಹಾರ ರಾಜಕಾರಣದ ವಿವಿಧ ಆಯಾಮಗಳನ್ನು ಗುರುತಿಸುವ ಪ್ರಯತ್ನವನ್ನು ಈ ಬರಹದಲ್ಲಿ ಮಾಡಲಾಗಿದೆ.