ಜನಪದ ಪೌರಾಣಿಕ ನೆಲೆಗಳು

Authors

  • ಡಾ. ಸಣ್ಣಹನುಮಪ್ಪ ಜಿ. Author

Abstract

ಪುರಾಣ'ವೆಂದರೆ ಸಾಮಾನ್ಯವಾಗಿ 'ಹಳೆಯದು', 'ಗತಕಾಲದ ಚರಿತೆ' ಎಂಬರ್ಥಗಳಿವೆ. ಗ್ರೀಕ್‌ನ "Mythos'ಎಂಬ ಪದದಿಂದ ಬಂದ ಇಂಗ್ಲೀಷ್‌ನ "Myth' ಗೆ ಸಂವಾದಿಯಾಗಿ ಕನ್ನಡದಲ್ಲಿ 'ಪುರಾಣ' ಎಂದು ಕರೆಯುತ್ತಾರೆ. ಅಂದರೆ ಗತಿಸಿಹೋದ ನೀತಿಕಥೆ ಎಂಬ ಅರ್ಥವನ್ನೂ ಪಡೆದುಕೊಂಡಿದೆ. ಪ್ರಾಚೀನ ಕಾಲದಲ್ಲಿ ನಡೆದ ಅಸಾಮಾನ್ಯ ಘಟನೆಗಳ ಪ್ರಸಿದ್ಧ ಕಥಾನಕಗಳೇ ಪುರಾಣಗಳೆನಿಸಿವೆ. ಮಾನವನಿಗೆ ಬುದ್ದಿ ಬಂದಾಗಿನಿಂದ ಅವನು ರೂಪಿಸಿಕೊಂಡು ಬಂದಿರುವ ಅತಾರ್ಕಿಕ ತಿಳಿವಳಿಕೆ ಮತ್ತು ಪವಿತ್ರವೆನಿಸಿದ ಭಾಷಿಕ ಸಂಕೇತಗಳ ನಿರೂಪಣೆಗಳ ಪುರಾಣಗಳಾಗಿವೆ. ಇಂಥ ಪುರಾಣಗಳ ಸೃಷ್ಟಿ ಯಾವುದೇ ಸಮಾಜ-ಸಮುದಾಯಗಳು ತಮ್ಮ ಬದುಕಿನಲ್ಲಿ ಮರೆಯಲಾಗದ ಮತ್ತು ಮೀರಬಾರದ ಮಹತ್ವದ ಘಟನೆಗಳೆಂದು ಭಾವಿಸುತ್ತಾರೆ. ಜಗತ್ತಿನ ಎಲ್ಲ ದೇಶಗಳೂ ತಮ್ಮದೇ ಆದ ಚರಿತ್ರೆ ಮತ್ತು ಪುರಾಣಗಳನ್ನು ಸೃಷ್ಟಿಸಿಕೊಂಡಿರುತ್ತವೆ. ಅಲ್ಲದೆ ತನ್ನ ರಾಷ್ಟ್ರೀಯ ಬದುಕಿನ ಪರಂಪರೆಯಲ್ಲಿ ಪೌರಾಣಿಕತೆಯನ್ನು ಎದ್ದು ಕಾಣುವಂತೆ ಬಿಂಬಿಸಲಾಗುತ್ತದೆ. ಹಾಗೆ ಮಾಡುವುದು ಪ್ರತಿಷ್ಠೆಯ ವಿಷಯವೂ ಆಗಿ ಪರಿಣಮಿಸಿದೆ. ಇದು ಯಾವುದೇ ಮಾನವ ಕುಲದ ಇತಿಹಾಸದಲ್ಲಿ ತನ್ನ ಸಂಸ್ಕೃತಿಯ ಅನನ್ಯತೆಯ ಸಂಕೇತಗಳೆಂದು ಭಾವಿಸಿ. ಗೌರವಾದರಗಳಿಂದ ಕ್ರಿಯಾತ್ಮಕವಾಗಿ ಆಚರಣೆಯಲ್ಲಿ ತರುತ್ತಾರೆ. ಆದ್ದರಿಂದ ಕಥೆ, ಪುರಾಣ ಮತ್ತು ಐತಿಹ್ಯಗಳು ಜನಮಾನಸದಲ್ಲಿ ಉಳಿದುಬಂದು ನಿತ್ಯ ಜೀವನದಲ್ಲಿ ಹಾಸು-ಹೊಕ್ಕಾಗಿ ಬೆರೆತು ಹೋಗಿರುತ್ತವೆ.

Downloads

Published

2021-01-01

Issue

Section

Articles

How to Cite

ಜನಪದ ಪೌರಾಣಿಕ ನೆಲೆಗಳು. (2021). International Journal of Food and Nutritional Sciences, 10(2), 754-769. https://www.ijfans.org/index.php/Journal/article/view/3286