ಅಂಬಿಗರ ಚೌಡಯ್ಯನವರ ವಚನಗಳಲ್ಲಿ ವೈಚಾರಿಕತೆಯ ನೋಟ
Abstract
ಇರುವ ಗೊಡ್ಡು ಸಂಪ್ರದಾಯಗಳು, ದೇವರು, ಧರ್ಮ, ಮತ, ಸ್ವರ್ಗ, ನರಕ, ಮಾಟ - ಮಂತ್ರ ಮುಂತಾದ ವಿಷಯಗಳಿಂದಾಗಿ ಅನೇಕ ಸಮಸ್ಯೆ ಹಾಗೂ ಸವಾಲುಗಳಿಗೆ ಅವರು ತನ್ನದೇ ಆದ ಆಲೋಚನಾ ಕ್ರಮ ಹಾಗೂ ಚಿಂತನೆಗಳನ್ನು ಸಂದರ್ಭಕ್ಕೆ ತಕ್ಕ ಹಾಗೆ ಪರಿಹಾರ ಕಂಡುಕೊಳ್ಳುವಲ್ಲಿ ಅವನ ಸಂಸ್ಕೃತಿಯ ಪರಂಪರೆ ಮತ್ತು ಭಾಷೆಯನ್ನು ಬಳಸುವುದು, ಅವನ ಬುದ್ಧಿಶಕ್ತಿಯ ಬಲದಿಂದ ಮಾತ್ರ ಸಾಧ್ಯ. ವೈಚಾರಿಕತೆ ಎಂದರೆ ಯತಾಸ್ಥಿತಿಯನ್ನು ಶಂಕಿಸುವುದು ಸಂಪ್ರದಾಯದಲ್ಲಿ ಸಂಕೇತಗಳಲ್ಲಿ, ಮೌಲ್ಯಗಳಲ್ಲಿ, ಆಚರಣೆಗಳಲ್ಲಿ, ಘಟನೆಗಳಲ್ಲಿ ಇನ್ನೂ ಹಲವು ಸಂಗತಿಗಳಲ್ಲಿ ಸರಿ ಸಮಾನತೆ ಕಾಣದಿದ್ದಾಗ ನಮ್ಮಲ್ಲಿ ಮಾನಸಿಕ ಸಂಘರ್ಷ ನಡೆದು ತಾರ್ಕಿಕವಾದ ವಿವೇಚನೆ ಹೊರಬಂದು ಭಿನ್ನವಾದ ಪ್ರತಿಕ್ರಿಯೆ 'ವೈಚಾರಿಕತೆ' ಎನಿಸಿಕೊಳ್ಳುವುದು. ವೈಚಾರಿಕತೆಯ ಬಗ್ಗೆ ಹುತಾತ್ಮ ಭಗತ್ ಸಿಂಗ್ "ಪ್ರಗತಿಗೆ ಬದ್ದನಾದ ಯಾವುದೇ ವ್ಯಕ್ತಿಯ ಹಳೆಯ ನಂಬಿಕೆಗಳ ಪ್ರತಿಯೊಂದು ಅಂಶವನ್ನು ವಿಮರ್ಶಿಸಿ ಅದನ್ನು ಅನುಮಾನದಿಂದ ನೋಡಿ ಸವಾಲೆಸೆಯಬೇಕು" ಪ್ರಚಲಿತವಾದ ನಂಬಿಕೆಗಳ ಮೇಲೆ ಮೂಲೆ ಮೂಲೆಗಳನ್ನು ಶೋಧಿಸಿ ಒಂದಂಶವನ್ನು ಬಿಡದೆ ತರ್ಕದ ಒರೆಗಲ್ಲಿಗೆ ಹಚ್ಚಿ ಪರೀಕ್ಷಿಸಬೇಕು. ತನ್ನನ್ನು ವಾಸ್ತವವಾದಿ ಎಂದು ಕರೆದುಕೊಳ್ಳುವವನು ಎಲ್ಲಾ ಪ್ರಾಚೀನ ನಂಬಿಕೆಗಳನ್ನು ಇಡಿಯಾಗಿ ಪ್ರಶ್ನಿಸಬೇಕು.





