ಗೊರವರು ಮತ್ತು ಅವರ ಸಂಸ್ಕೃತಿ

Authors

  • ಡಾ. ಕಾಳಿಂಗ. ಡಿ. ಗೊಳಸಂಗಿ Author

Abstract

ಧಾರ್ಮಿಕ ವೃತ್ತಿ ಕಲಾ ಮೇಳಗಳಲ್ಲಿ ಗೊರವರ ಮೇಳವೂ ಒಂದು. ಕನ್ನಡ ನಾಡಿನಾದ್ಯಂತ ಕಂಡು ಬರುವ ಗೊರವರ ಮೇಳಗಳು ಆಯಾ ಜಿಲ್ಲೆಯಲ್ಲಿ ಧಾರ್ಮಿಕ ಸ್ಥಳಗಳನ್ನು ಹೊಂದಿದ್ದು, ತಮ್ಮದೇ ಆದ ಪರಂಪರೆಯನ್ನು ಮುಂದುವರಿಸಿಕೊಂಡು ಬರುತ್ತಲಿವೆ. ಅದರಂತೆ ವಿಜಾಪೂರ ಜಿಲ್ಲೆಯ ಸಿಂದಗಿ ತಾಲೂಕಿನ ದೇವರಹಿಪ್ಪರಗಿ ಮತ್ತು ಹುನಗುಂದ ತಾಲೂಕಿನ ಗುಡೂರ ಗ್ರಾಮಗಳು ಗೊರವರ ಪ್ರಮುಖ ಧಾರ್ಮಿಕ ಕ್ಷೇತ್ರಗಳಾಗಿವೆ. ಪ್ರತಿ ವರ್ಷ ಮಹಾನವಮಿ ಕಾಲಕ್ಕೆ ಬನ್ನಿ ಕೊಡುವ ಉತ್ಸವ ಮೂಲ ಮೈಲಾರದಲ್ಲಿ ನಡೆಯುವಂತೆ ದೇವರಹಿಪ್ಪರಗಿಯಲ್ಲಿ ಈ ಉತ್ಸವ ನಡೆಯುತ್ತಿದ್ದು, ಊರಲ್ಲಿರುವ ಮಲ್ಲಯ್ಯನ ಗುಡಿಯಿಂದ ಊರ ಹೊರಗಿರುವ ರಾವುತರಾಯನ ಗುಡಿಗೆ ಹೋಗಿ ಈ ಗೊರವರು ಮೊದಲು ಬನ್ನಿ ಮುಡಿಸಿದ ನಂತರವೇ ಊರನವರೆಲ್ಲ ಬನ್ನಿ ಮುಡಿಯುತ್ತಾರೆ.

Published

2022-01-01

Issue

Section

Articles

How to Cite

ಗೊರವರು ಮತ್ತು ಅವರ ಸಂಸ್ಕೃತಿ. (2022). International Journal of Food and Nutritional Sciences, 11(10), 5750-5755. https://www.ijfans.org/index.php/Journal/article/view/11334