ಹೊಸಗನ್ನಡ ಸಾಹಿತ್ಯದ ಮೂಲಪುರುಷ ಶ್ರೀ ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ

Authors

  • Ganesha Assistant Professor of Kannada, Govt. First Grade College, Gundlupet. Author

DOI:

https://doi.org/10.69889/f2mm5325

Abstract

ಹೊಸಗನ್ನಡ ಸಾಹಿತ್ಯದ ಮೂಲಪುರುಷರಲ್ಲಿ ಒಬ್ಬರಾದ ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯನವರು ಜನವರಿ ೩, ೧೮೮೪ರಲ್ಲಿ ತುಮಕೂರು ಜಿಲ್ಲೆಯ ಸಂಪಿಗೆ ಎಂಬ ಹಳ್ಳಿಯಲ್ಲಿ ಜನಿಸಿದರು. ತಾಯಿ ಭಾಗೀರಥಮ್ಮ; ತಂದೆ ಮೈಲಾರಯ್ಯ; ತಾಯಿಯ ಊರು ಸಂಪಿಗೆ. ತಂದೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಬೆಳ್ಳೂರಿನವರು ; ಹಾಗಾಗಿ 'ಶ್ರೀ'ಯವರ ಮೂಲ ಸ್ಥಳ ಬೆಳ್ಳೂರಾಯಿತು. ಮೈಲಾರಯ್ಯನವರು ಶ್ರೀರಂಗಪಟ್ಟಣದಲ್ಲಿ ವಕೀಲಿ ವೃತ್ತಿಯನ್ನು ನಡೆಸುತ್ತಿದ್ದುದರಿಂದ ಬಿಎಂಶ್ರೀ ಅವರ ಬಾಲ್ಯ ಅಲ್ಲಿಯೇ ಕಳೆದುದು ಸಹಜ. ಶ್ರೀಕಂಠಯ್ಯನವರ ತಂದೆ ಆಗಿನ ಕಾಲದಲ್ಲಿ ಹೆಸರಾಂತ ವ್ಯಕ್ತಿಯೇ ಆಗಿದ್ದರು. ಬಿಎಂಶ್ರೀಯವರಿಗೆ ಇಬ್ಬರು ತಂಗಿಯರು, ಇಬ್ಬರು ತಮ್ಮಂದಿರು ಇದ್ದರು. ತಮ್ಮಂದಿರಲ್ಲಿ ಒಬ್ಬರಾದ ಬಿ.ಎಂ. ಶಿವರಾಮಯ್ಯನವರು ನಂಜನಗೂಡಿನಲ್ಲಿದ್ದು, ಬಹಳ ಕಾಲ ವಕೀಲಿ ವೃತ್ತಿಯಲ್ಲಿದ್ದರು. 'ಶ್ರೀ'ಯವರ ತಂಗಿಯರ ಹೆಸರು ಕಾವೇರಮ್ಮ ಮತ್ತು ನಂಜಮ್ಮ; ಕಿರಿಯ ತಮ್ಮನ ಹೆಸರು ಕೃಷ್ಣಸ್ವಾಮಿ.

Downloads

Published

2023-02-27

Issue

Section

Articles

How to Cite

ಹೊಸಗನ್ನಡ ಸಾಹಿತ್ಯದ ಮೂಲಪುರುಷ ಶ್ರೀ ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ. (2023). International Journal of Food and Nutritional Sciences, 12(1), 9117-9126. https://doi.org/10.69889/f2mm5325