Volume 14 | Issue 5
Volume 14 | Issue 5
Volume 14 | Issue 5
Volume 14 | Issue 5
Volume 14 | Issue 5
ವೇದ ಉಪನಿಷತ್ತೋಕ್ತ ಆರ್ಯಧರ್ಮವು ಯಜ್ಜಾಯಾಗಾದಿಗಳ ಉಚ್ಚಾಯ ಸ್ಥಿಯಲ್ಲಿ ಸತ್ವಗುಣಕ್ಕೆ ಬದಲಾಗಿ ತಮೋಗುಣಗಳಿಗೆ ಆಶ್ರಯಕೊಟ್ಟ ಕಾರಣವಾಗಿ ತನ್ನ ಜನಾಕರ್ಷಣೆಯನ್ನು ಕಳೆದುಕೊಂಡರೆ, ಮುಂದೆ ಬಂದ ಬೌದ್ಧ-ಜೈನ ಧರ್ಮಗಳು ವಿಶೇಷ ಜನಾನುರಾಗದ ಪಂಥಗಳಾಗಿ ಉಳಿಯಲಿಲ್ಲ. ಶ್ರೀವೈಷ್ಣವ ಪಂಥವು ಶ್ರೀರಾಮಾನುಜಾಚಾರ್ಯರ ನೇತೃತ್ವದಲ್ಲಿ ಭಿನ್ನತೆಗೆ ಅವಕಾಶಕೊಟ್ಟಿತು. ಆಗಮಗಳ ತಳಹದಿಯ ಮೇಲೆ ವಿಕಾಸಹೊಂದುತ್ತ ಬಂದ ಅತ್ಯಂತ ಪ್ರಾಚೀನ ಶೈವಪಂಥವೂ ಕೂಡ ತಕ್ಕ ಬದಲಾವಣೆ ಹೊಂದಬೇಕಾಗಿ ಬಂದದ್ದರಿಂದ ವೀರಶೈವ ಪ್ರಾದುರ್ಭಾವಕ್ಕೆ ಬರುವಂತಾಯಿತು. ಏಕೆಂದರೆ ಧರ್ಮ ಪ್ರಗತಿಯುಳ್ಳದ್ದು, ಅಂದಂದಿನ ಜನಜೀವನದ ಹೃದಯದ ಮಿಡಿತ ಹಂಬಲ ಮತ್ತು ಆಶಯಗಳಿಗೆ ತಕ್ಕ ಹಾಗೆ ಅದು ಹೊಸ ರೂಪಧಾರಣ ಮಾಡಬೇಕಾಯಿತು. ಪ್ರಕೃತಿ ನಿಯಮದಂತೆ ಆದ ಈ ಬದಾಲಾವಣೆಯನ್ನು ಹೃದಯ ತೆರೆದು ವೀಕ್ಷಿಸಿ, ಅದಕ್ಕೆ ಸ್ಪಂದಿಸಿದ ಬಸವಣ್ಣ ಸಮಕಾಲೀನ ಸಮಾಜದ ಸುಧಾರಣೆಗೆ ಧರ್ಮವನ್ನು ಮಾಧ್ಯಮವನ್ನಾಗಿ ಸ್ವೀಕರಿಸಿದನು.